ರಜಿನಿಕಾಂತ್ ನಡೆದು ಬಂದ ಹಾದಿ | ಕಂಡಕ್ಟರ್ ನಿಂದ ರಾಜಕಾರಿಣಿವರೆಗೆ | Oneindia kannada

2017-12-31 52

ಸೂಪರ್ ಸ್ಟಾರ್ ರಜನಿಕಾಂತ್ ಅವರು ಹಲವು ದಶಕಗಳ ಬಳಿಕ ಬಹುದೊಡ್ಡ ಘೋಷಣೆ ಮಾಡಿದ್ದಾರೆ. ಅಧಿಕೃತವಾಗಿ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದ್ದಾರೆ.ಚೆನ್ನೈನ ರಾಘವೇಂದ್ರ ಹಾಲ್ ನಲ ಲಿ ಅಭಿಮಾನಿಗಳ ಜತೆಗಿನ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾನುವಾರದಂದು ರಜನಿ ಅವರು ಈ ಘೋಷಣೆ ಮಾಡಿದರು. ರಜನಿ ಅವರ ಘೋಷಣೆ ಕಿವಿಗೆ ಬೀಳುತ್ತಿದ್ದಂತೆ, ಅಭಿಮಾನಿಗಳು ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಸಾಮಾಜಿಕ ಜಾಲ ತಾಣಗಳಲ್ಲಿ ರಜನಿಕಾಂತ್ ಹೆಸರಿನ ಹ್ಯಾಶ್ ಟ್ಯಾಗ್ ಗಳು ಸಕತ್ ಟ್ರೆಂಡಿಂಗ್ ನಲ್ಲಿದೆ.ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಕಾರಣಿಗಳು ನಮ್ಮ ಹಣವನ್ನು ದೋಚುತ್ತಿದ್ದಾರೆ. ಈ ವ್ಯವಸ್ಥೆಯನ್ನು ಬದಲಾಯಿಸಬೇಕಿದೆ ಇದಕ್ಕಾಗಿ ನಾನು ರಾಜಕೀಯ ಪ ರವೇಶ ಬಯಸಿದ್ದೇನೆ ಎಂದು ರಜನಿ ಹೇಳಿದ್ದಾರೆ.ಇನ್ನು ರಜಿನಿಕಾಂತ್ ತಮ್ಮ ಜೀವನದಲ್ಲಿ ಬಹಳಷ್ಟು ಕಷ್ಟಪಟ್ಟು ಮೇಲೆ ಬಂದವರು. ಮೊದಲು ಕಂಡಕ್ಟರ್ ಆಗಿದ್ದ ರಜಿನಿಕಾಂತ್ ಸಿನಿಮಾದಲ್ಲಿ ಮಿಂಚಿ ಇದೀಗ ರಾಜಕಾರಣಿಯಾಗಿದ್ದಾರೆ. ಇದು ಕಂಡಕ್ಟರ್ ನಿಂದ ರಾಜಕಾರಣಿವರೆಗೆ ನಡೆದು ಬಂದ ಹಾದಿ.